Thursday, 25 December 2014

EXPERT PU COLLEGE VALACHIL - NATIONAL TALENT SEARCH- VINAY KUMAR G.V. SELECTED



ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗೆ ಅಭಿನಂದನೆ

ಮಂಗಳೂರು: ನವದೆಹಲಿಯ ಎನ್.ಸಿ.ಇ.ಆರ್.ಟಿ. ನಡೆಸುವ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ(NATIONAL TALENT SEARCH) ಯಲ್ಲಿ ಮಂಗಳೂರಿನ ವಳಚ್ಚಿಲ್ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ವಿನಯ್‌ ಕುಮಾರ್ ಜಿ.ವಿ. ಗಮನಾರ್ಹ ಸಾಧನೆ ಮಾಡಿದ್ದಾರೆ.
ಎನ್.ಸಿ.ಇ.ಆರ್.ಟಿ. ನಡೆಸುವ ಪ್ರತಿಭಾನ್ವೇಷಣಾ ಪರೀಕ್ಷೆ(NATIONAL TALENT SEARCH–NTS) ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಷ್ಠೆಯ ವಿಷಯವಾಗಿದ್ದು, MENTAL ABILITY TEST್(MAT) ಮತ್ತು SCHOLESTIC ABILITY TEST್(SAT) ಎಂಬ ಪ್ರಕಾರಗಳಲ್ಲಿ ನಡೆಯುತ್ತದೆ.
ವಿನಯ್ ಕುಮಾರ್ 2013ರಲ್ಲಿ ನಡೆದ ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಗೊಂಡು(50ಸಾವಿರ ವಿದ್ಯಾರ್ಥಿಗಳ ಪೈಕಿ 235 ಮಂದಿ ತೇರ್ಗಡೆಯಾಗಿದ್ದರು.) 2014 ಅಕ್ಟೋಬರ್ 19ರಂದು ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಮೆಂಟಲ್ ಎಬಿಲಿಟಿ ಟೆಸ್ಟ್(ಮ್ಯಾಟ್) ಮತ್ತು ಸ್ಕಾಲೆಸ್ಟಿಕ್ ಎಬಿಲಿಟಿ ಟೆಸ್ಟ್(ಎಸ್ಎಟಿ) ಪರೀಕ್ಷೆಯಲ್ಲಿ ಉನ್ನತ ಅಂಕದೊಂದಿಗೆ ವಿನಯ್ ಕುಮಾರ್ ಆಯ್ಕೆಯಾಗುವ ಮೂಲಕ ಎಕ್ಸ್‌ಪರ್ಟ್  ಸಂಸ್ಥೆಗೆ ಕೀರ್ತಿ ತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪರೀಕ್ಷೆಯಲ್ಲಿ ಸುಮಾರು 3ಸಾವಿರದಷ್ಟು ಮಂದಿ ಪರೀಕ್ಷೆ ಬರೆದಿದ್ದು, 1ಸಾವಿರ ಮಂದಿ ಆಯ್ಕೆಯಾಗಿದ್ದಾರೆ.
ಸ್ಕಾಲರ್‌ಶಿಪ್ :
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾಸಿಕ ರೂ.500 ವಿದ್ಯಾರ್ಥಿ ವೇತನ ಲಭಿಸುತ್ತದೆ. ವಿಜ್ಞಾನ ವಿಷಯದಲ್ಲಿ ಉನ್ನತ ಶಿಕ್ಷಣ ಮುಂದುವರಿಸುವ ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಪದವಿ ಗಳಿಸುವವ ವರೆಗೆ ಈ ವಿದ್ಯಾರ್ಥಿ ವೇತನ ಮುಂದುವರಿಯುತ್ತದೆ. ವಿಜ್ಞಾನದತ್ತ ವಿದ್ಯಾರ್ಥಿಗಳನ್ನು ಸೆಳೆಯುವುದೇ ಈ ಪರೀಕ್ಷೆಯ ಪ್ರಧಾನ ಉದ್ದೇಶ.

ವಿನಯ್‌ಕುಮಾರ್ ಜಿ.ವಿ. ಮೈಸೂರಿನ ಅಗ್ರಹಾರ ನಿವಾಸಿಯಾಗಿದ್ದು, ಅವರ ತಂದೆ ವಸಂತ ಕುಮಾರ್ ಜಿ.ಎಸ್. ಮೈಸೂರಿನ ವಿಜಯ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಉನ್ನತ ಶಿಕ್ಷಣಕ್ಕಾಗಿ, ಮೈಸೂರಿನ ಮಹರ್ಷಿ ಪಬ್ಲಿಕ್ ಸ್ಕೂಲ್‌ನ 8ನೇ ತರಗತಿಯಲ್ಲಿರುವಾಗಲೇ ವಿನಯ್ ಬರೆಯಲು ತಯಾರಿ ನಡೆಸಿದ್ದರು. ಅಲ್ಲಿನ ಉಪ ಪ್ರಾಂಶುಪಾಲ ಸತ್ಯನಾರಾಯಣ ಶರ್ಮ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಪ್ರೇರಣೆ, ತರಬೇತಿ ನೀಡಿದರು.

ಪೂರ್ವತಯಾರಿ:
8ನೇ ತರಗತಿಯಿಂದಲೇ ಆರಂಭ. 10ನೇ ತರಗತಿಯಲ್ಲಿ ಬರೆದೆ. ಮೈಸೂರಿನಲ್ಲಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಟ್ಯೂಷನ್ ನೀಡುತ್ತಿದ್ದ ಕೆ.ಎಚ್.ರಾವ್ ಪ್ರೇರಣೆ ನೀಡಿದರು. ಈ ಪರೀಕ್ಷೆಯ ಬಗ್ಗೆ ಸಂಪೂರ್ಣ ಮಾಹಿತಿದರು. 8ನೇ ತರಗತಿಯಲ್ಲಿ ಈ ಪರೀಕ್ಷೆಯಲ್ಲಿ ಕಂಡ ಸೋಲು(3 ಅಂಕಗಳಲ್ಲಿ ವಿಫಲ) ಮುಂದಿನ ಪರೀಕ್ಷೆ ಬರೆಯಲು ಛಲವನ್ನು ಮೂಡಿಸಿತು. ಕೆ.ಎಚ್.ರಾವ್ ಅವರು ಎಸ್ಎಸ್ಎಲ್‌ಸಿ ಬಳಿಕ ಉನ್ನತ ಶಿಕ್ಷಣ ಪಡೆಯಲು ಮಂಗಳೂರಿನ ಪ್ರತಿಷ್ಠಿತ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿಗೆ ಸೇರುವಂತೆ ಪ್ರೋತ್ಸಾಹದ ಮಾತುಗಳನ್ನಾಡಿದರು. ಅವರ ಮಾರ್ಗದರ್ಶನದಂತೆ ಮುನ್ನಡೆದ ಪರಿಣಾಮ ಸಾಧನೆಗೆ ಯಶಸ್ಸು ಲಭಿಸಿದೆ. ಇದರಿಂದ ಅವರಿಗೆ ತುಂಬು ಸಂತಸವಾಗಿದೆ ಎಂದು  ವಿನಯ್‌ಕುಮಾರ್ ಜಿ.ವಿ. ಕೃತಜ್ಞತೆಯಿಂದಲೇ ಹೇಳುತ್ತಾರೆ.

ಎಕ್ಸ್‌ಪರ್ಟ್ ಶಿಕ್ಷಣ ಕಣ್ಣು ತೆರೆಸಿತು:
ರಾಷ್ಟ್ರಮಟ್ಟದ ಮೆಂಟಲ್ ಎಬಿಲಿಟಿ ಟೆಸ್ಟ್(ಮ್ಯಾಟ್) ಮತ್ತು ಸ್ಕಾಲೆಸ್ಟಿಕ್ ಎಬಿಲಿಟಿ ಟೆಸ್ಟ್(ಎಸ್ಎಟಿ) ಪರೀಕ್ಷೆ ಬರೆಯಲು ಎಕ್ಸ್‌ಪರ್ಟ್ ಕಾಲೇಜಿನ ಶಿಕ್ಷಣ ಉಪಕಾರಿಯಾಗಿದೆ. ಇಲ್ಲಿನ ಶಿಕ್ಷಣದಿಂದ ಪರೀಕ್ಷೆ ಮತ್ತಷ್ಟು ಸುಲಭವಾಗುವಂತೆ ಮಾಡಿದೆ. ಡಿಸೆಂಬರ್ 23ರಂದು ಈ ಪರೀಕ್ಷೆಯ ಫಲಿತಾಂಶ ಬಂದಾಗ ಎಕ್ಸ್‌ಪರ್ಟ್ ಸಂಸ್ಥೆಗೆ ಸೇರಿದ ಬಗ್ಗೆ ಅಭಿಮಾನ ಮೂಡಿತು. ಈ ಕಾಲೇಜಿಗೆ ಸೇರಿದ ಕಾರಣ ಓದುವುದು ಹೇಗೆ, ಸಮಯವನ್ನು ಓದಿಗೆ ಮೀಸಲಿಡುವ ವಿಷಯ ತಿಳಿಯಿತು. ಶ್ರಮ ವಹಿಸಿದರೆ ಬದುಕಿನಲ್ಲಿ ಯಶಸ್ಸು ಸುಲಭಸಾಧ್ಯ ಎಂಬ ಸತ್ಯವನ್ನು ಎಕ್ಸ್‌ಪರ್ಟ್ ಕಲಿಸಿದೆ. ಹೆತ್ತವರು ನೀಡಿದ ಪ್ರೋತ್ಸಾಹ ನನ್ನ ಸಾಧನೆಗೆ ದಾರಿದೀಪವಾಗಿದೆ. ನವದೆಹಲಿಯ ಆಲ್ ಇಂಡಿಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಕನಸು ಇದೆ ಎನ್ನುತ್ತಾರೆ ವಿನಯ್‌ಕುಮಾರ್ ಜಿ.ವಿ.
––––––––––––––––––––––––––––––––––––––––––––––––––––––––––––––––––––––––
ವರದಿ: ಸುರೇಶ್ ಎಡನಾಡು, ಕನ್ನಡ ವಿಭಾಗ, ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜು, ವಳಚ್ಚಿಲ್, ಮಂಗಳೂರು.
––––––––––––––––––––––––––––––––––––––––––––––––––––––––––––––––––––––––

No comments:

Post a Comment