Tuesday, 30 December 2014
EXPERT DAY CELEBRATION-14
ಕನಸು ಮತ್ತು ಪರಿಶ್ರಮದಿಂದ ಯಶಸ್ಸು ಸಾಧ್ಯ : ವಿಜ್ಞಾನಿ ವಿ.ಕೋಟೇಶ್ವರ ರಾವ್
ಮಂಗಳೂರು: ಭವಿಷ್ಯದ ಬಗ್ಗೆ ಕನಸು ಮತ್ತು ಕಠಿಣ ಪರಿಶ್ರಮದಿಂದ ಮಾತ್ರ ಬದುಕಿನಲ್ಲಿ ಯಶಸ್ಸು ಸಾಧ್ಯ ಎಂದು ಇಸ್ರೋದ ನಿಕಟಪೂರ್ವ ಕಾರ್ಯದರ್ಶಿ(ವಿಜ್ಞಾನ) ವಿ.ಕೋಟೇಶ್ವರ ರಾವ್ ಹೇಳಿದರು.
ಅವರು ಮಂಗಳೂರಿಗೆ ಸಮೀಪದ ವಳಚ್ಚಿಲ್‌ನ ಎಕ್ಸ್‌ಪರ್ಟ್ ಪ.ಪೂ. ಕಾಲೇಜಿನ ಕ್ಯಾಂಪಸ್ಸಿನಲ್ಲಿ ಎಕ್ಸ್‌ಪರ್ಟ್ ಪ.ಪೂ. ಕಾಲೇಜಿನ 28ನೇ ವಾರ್ಷಿಕ ದಿನಾಚರಣೆಯ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಗಳನ ಅಂಗಳಕ್ಕಿಳಿಯುವ ವಿಜ್ಞಾನಿಗಳ ಸಾಧನೆ ಮತ್ತು ಬೆಂಗಳೂರಿನ ಬಾಹ್ಯಾಕಾಶ ಕೇಂದ್ರದ ಹುಟ್ಟು ಬೆಳವಣಿಗೆಯನ್ನು ಸಚಿತ್ರವಾಗಿ ವಿವರಿಸಿದ ಅವರು, ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧಿಸಬೇಕಾದ ಸಾಧ್ಯತೆಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯ ಸಿಇಒ ತುಳಸಿ ಮದ್ದಿನೇನಿ ಮಾತನಾಡಿ, ಸಮಾಜದಲ್ಲಿ ಉನ್ನತ ಗೌರವ ಪ್ರಾಪ್ತಿಗಾಗಿ ಡಾಕ್ಟರ್, ಎಂಜಿನಿಯರ್ ಆಗಲು ವಿದ್ಯಾರ್ಥಿಗಳು ಕನಸು ಕಾಣುತ್ತಾರೆ. ಆದರೆ ಸಮಾಜದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಿದರೂ ಸಮಾಜದ ಅಂಗೀಕಾರ ಸಿಗುತ್ತದೆ. ಉತ್ತಮ ಸಾಧನೆ ಮಾಡುವ ಪ್ರವೃತ್ತಿ ಮಾನವನಿಗೆ ಪ್ರಾಚೀನ ಕಾಲದಿಂದಲೇ ಇತ್ತು. ಆದರೆ ನಮ್ಮ ಅಂತರಂಗದಲ್ಲಿ ಇನ್ನೊಬ್ಬನನ್ನು ಸೋಲಿಸುವ, ಮಣಿಸುವ ಇಚ್ಛೆ ಇರಬಾರದು. ಎಲ್ಲರೂ ಸೇರಿ ಸಾಧನೆ ಮಾಡುವ ಮನೋಬಲ ನಮ್ಮಲ್ಲಿ ಮೂಡಿಬರಬೇಕು ಎಂದರು.
ಆಹಾರ-–ನಿದ್ದೆ-–ಅಧ್ಯಯನ-–ವ್ಯಾಯಾಮಗಳಿಂದ ಜೀವನದಲ್ಲಿ ಯಶಸ್ಸು ಸಾದ್ಯ; ಆದರೆ ಯಾವತ್ತೂ ಮದ್ಯಪಾನ ಹಾಗೂ ಡ್ರಗ್ಸ್‌ಗೆ ಬಲಿಯಾಗಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎಕ್ಸ್‌ಪರ್ಟ್ ಸಮೂಹಸಂಸ್ಥೆಗಳ ಕಾರ್ಯದರ್ಶಿ ಶ್ರೀಮತಿ ಉಷಾಪ್ರಭಾ ಎನ್.ನಾಯಕ್ ಮಾತನಾಡಿ, ಎಂಜಿನಿಯರ್ ಮತ್ತು ಡಾಕ್ಟರ್‌ಗಳನ್ನು ಮಾತ್ರ ಉತ್ಪಾದಿಸುವುದು ಎಕ್ಸ್‌ಪರ್ಟ್ ಉದ್ದೇಶವಲ್ಲ; ಉದ್ಯಮಿಗಳನ್ನು ಸೃಷ್ಠಿಸುವ ದೂರದೃಷ್ಠಿಯನ್ನೂ ನಾವು ಹೊಂದಿದ್ದೇವೆ. ಎಕ್ಸ್‌ಪರ್ಟ್ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳೇ ಆಯೋಜಿಸಿದ ಸಿನೇಮಾ ಥಿಯೇಟರ್, ಆಹಾರ ಮೇಳ, ಪ್ರದರ್ಶನ ಮತ್ತು ಮಾರಾಟ ಮೇಳ ಇದಕ್ಕೆ ಸಾಕ್ಷಿ ಎಂದರು.
ಕೊಡಿಯಾಲ್‌ಬೈಲ್ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಮಚಂದ್ರ ಭಟ್ ಮತ್ತು ವಳಚ್ಚಿಲ್ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಕೆ.ವಿಜಯನ್ ವರದಿ ಮಂಡಿಸಿದರು.
ಟ್ರಸ್ಟಿಗಳಾದ ಪ್ರೊ.ಪಿ.ಶಾಂತಾರಾಮ, ಉಸ್ತಾದ್ ರಫೀಕ್ ಖಾನ್, ಬಿ.ಮಂಜುನಾಥ ಕಾಮತ್, ಆಡಿಟರ್ ಎಂ. ಜಗನ್ನಾಥ್ ಕಾಮತ್, ಎಸ್.ಎಸ್. ನಾಯಕ್, ಎಂ.ಫಾರ್ ಕಂಪೆನಿಯ ವಲಯ ಸಂಯೋಜಕ ಅನಿಲ್ ಭಂಡಾರಿ, ಎ.ಐ.ಸಿ.ಇ. ವಿಭಾಗದ ಮುಖ್ಯಸ್ಥ ವಿಪಿನ್ ಕುಮಾರ್, ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಕರಾದ ವಿದ್ಯಾಶಾರದಾ ಜಿ.ಕೆ, ಕರುಣಾಕರ ಬಳ್ಕೂರು, ಅಲ್ಯುಮಿನಿ ಕಾರ್ಯದರ್ಶಿ ಶ್ರದ್ಧಾ ಗುಪ್ತಾ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದನ್ ಜಿ.ಆರ್. ಉಪಸ್ಥಿತರಿದ್ದರು.
ಎಕ್ಸ್‌ಪರ್ಟ್ ಸಮೂಹಸಂಸ್ಥೆಗಳ ಅಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್ ಸ್ವಾಗತಿಸಿದರು. ಕಾರ್ಯಕ್ರಮ ನಿರ್ದೇಶಕ ಸುಬ್ರಹ್ಮಣ್ಯ ಉಡುಪ ವಂದಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು.
-----------------------------------------------------------------------------------------------------
ವರದಿ: ಸುರೇಶ್ ಕೆ., ಕನ್ನಡ ವಿಭಾಗ, ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜು, ವಳಚ್ಚಿಲ್, ಮಂಗಳೂರು.
-----------------------------------------------------------------------------------------------------
Thursday, 25 December 2014
EXPERT PU College Valachil Ex' Mas-14
ಗಮನಸೆಳೆಯುತ್ತಿರುವ ಎಕ್ಸ್‌ಪರ್ಟ್ ಗೋದಲಿ
ಮಂಗಳೂರು: ಕ್ರಿಸ್ಮಸ್ ಪ್ರಯುಕ್ತ ಮಂಗಳೂರಿನ ವಳಚ್ಚಿಲ್ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನಿರ್ಮಿಸಿದ ಬೃಹತ್ ಗೋದಲಿ ತನ್ನ ಸೊಬಗಿನಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಕಳೆದ ಎರಡು ವಾರಗಳಿಂದ ಪ್ರಥಮ ಪದವಿ ಪೂರ್ವ ತರಗತಿಯ ವಿಜ್ಞಾನ ವಿದ್ಯಾರ್ಥಿಗಳ `ಗ್ರೀನ್ ಎಕ್ಸ್' ಕ್ಲಬ್ಬಿನ ಸದಸ್ಯರ ಸಹಕಾರದಿಂದ ಈ ಗೋದಲಿ ಸಾಕ್ಷಾತ್ಕಾರಗೊಂಡಿದೆ. ಸುಮಾರು 7ಮೀ ಉದ್ದ ಮತ್ತು 4ಮೀ ಅಗಲವಿರುವ ಈ ಗೋದಲಿ ನಿರ್ಮಾಣದಲ್ಲಿ 18ಕ್ಕೂ ಅಧಿಕ ವಿದ್ಯಾರ್ಥಿಗಳು ಕೈಜೋಡಿಸಿದ್ದರು. ಏಸುಕ್ರಿಸ್ತನ ಜನ್ಮಸ್ಥಳ ಬೆತ್ಲೆಹೇಮ್ ಎಕ್ಸ್‌ಪರ್ಟ್ ಕ್ಯಾಂಪಸ್ಸಿನಲ್ಲಿ ಸಾಕಾರಗೊಳ್ಳಲು `ಗ್ರೀನ್ ಎಕ್ಸ್' ಕ್ಲಬ್ಬಿನ ಸಕ್ರಿಯ ಸದಸ್ಯರಾದ ರಾಹುಲ್ ಎಸ್. ಪಾಟೀಲ್ ಮತ್ತು ಅಭಿಷೇಕ್ ಉಮಾಶಂಕರ್ ಅವರ ಪರಿಶ್ರಮ, ಚಿಂತನೆ, ವಿನ್ಯಾಸಗಳು ಗೋದಲಿಯ ಅಂದಚಂದವನ್ನು ಇಮ್ಮಡಿಗೊಳಿಸಿದೆ.
ಕಳೆದ ಎರಡು ವಾರಗಳಲ್ಲಿ ಕಾಲೇಜಿನ ಸಾಮಾಜಿಕವಾಗಿ ಉಪಯೋಗಪ್ರದ ಉತ್ಪಾದಕ ಕಾರ್ಯ(SUPW) ಪೀರಿಯಡ್ ನಲ್ಲಿ ಆಸಕ್ತ ವಿದ್ಯಾರ್ಥಿಗಳು ಗೋದಲಿ ನಿರ್ಮಾಣ ಕಾರ್ಯದಲ್ಲಿ ವಿಶೇಷವಾಗಿ ನೆರವು ನೀಡಿದ್ದರು. ಕ್ರಿಸ್ಮಸ್ ದಿನದಂದು ಪೂರ್ಣಗೊಂಡ ಗೋದಲಿ ಪರಿಸರ, ಸ್ವಚ್ಛತೆಯೊಂದಿಗೆ ಭಕ್ತಿ-ಭಾವವನ್ನು ಸಹಜವಾಗಿ ಮೂಡಿಸುವಂತಿದೆ. ತಾಗಿ-ಭತ್ತದ ಮೊಳಕೆಯಿಂದ ರಚಿಸಿದ ನಕ್ಷತ್ರ, ತೂಗಾಡುವ ರಂಗುರಂಗಿನ ವಿದ್ಯುದ್ದೀಪಗಳು, ನಕ್ಷತ್ರಗಳು ಗೋದಲಿಗೆ ಮತ್ತಷ್ಟು ಮೆರುಗು ನೀಡಿದೆ.
––––––––––––––––––––––––––––––––––––––––––––––––––––––––––––––––––––––––
ವರದಿ: ಸುರೇಶ್ ಎಡನಾಡು, ಕನ್ನಡ ವಿಭಾಗ, ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜು, ವಳಚ್ಚಿಲ್, ಮಂಗಳೂರು.
––––––––––––––––––––––––––––––––––––––––––––––––––––––––––––––––––––––––
––––––––––––––––––––––––––––––––––––––––––––––––––––––––––––––––––––––––
ಅಭಿನಂದನೆ
ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ
ಎಕ್ಸ್ಪಟರ್್ ಪದವಿಪೂರ್ವ ಕಾಲೇಜು ವಿದ್ಯಾಥರ್ಿಗೆ ಅಭಿನಂದನೆ
ಮಂಗಳೂರು: ನವದೆಹಲಿಯ ಎನ್.ಸಿ.ಇ.ಆರ್.ಟಿ. ನಡೆಸುವ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ(ನ್ಯಾಶನಲ್ ಟ್ಯಾಲೆಂಟ್ ಸಚರ್್)ಯಲ್ಲಿ ಮಂಗಳೂರಿನ ವಳಚ್ಚಿಲ್ ಎಕ್ಸ್ಪಟರ್್ ಪದವಿಪೂರ್ವ ಕಾಲೇಜಿನ ವಿದ್ಯಾಥರ್ಿ ವಿನಯ್ಕುಮಾರ್ ಜಿ.ವಿ. ತೇರ್ಗಡೆಗೊಂಡಿದ್ದು, ಎಕ್ಸ್ಪಟರ್್ ಸಮೂಹಸಂಸ್ಥೆಗಳ ಅಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್ ಮತ್ತು ಕಾರ್ಯದಶರ್ಿ ಶ್ರೀಮತಿ ಉಷಾಪ್ರಭಾ ಎನ್. ನಾಯಕ್ ವಿದ್ಯಾಥರ್ಿಯನ್ನು ಅಭಿನಂದಿಸಿದ್ದಾರೆ.
ಎಕ್ಸ್ಪಟರ್್ ಸಮೂಹಸಂಸ್ಥೆಗಳ ಟ್ರಸ್ಟಿಗಳಾದ ಪ್ರೊ. ಪಿ.ಶಾಂತಾರಾಮ, ಡಾ.ಡಿ.ಶ್ರೀಪತಿ ರಾವ್, ಡಾ.ಪ್ರೇಮ್ಕುಮಾರ್, ಉಸ್ತಾದ್ ರಫೀಕ್ ಖಾನ್, ಅಮೃತ್ ಕಿಣಿ, ಬಿ.ಮಂಜುನಾಥ್ ಕಾಮತ್, ವಳಚ್ಚಿಲ್ ಎಕ್ಸ್ಪಟರ್್ ಪದವಿಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಡಾ.ಎನ್.ಕೆ.ವಿಜಯನ್, ವೈಸ್ಪ್ರಿನ್ಸಿಪಾಲ್ ಗುರುದತ್ತ್ ಎನ್. ಅವರು ಅಭಿನಂದಿಸಿದ್ದಾರೆ.
ಎನ್.ಸಿ.ಇ.ಆರ್.ಟಿ. ನಡೆಸುವ ಪ್ರತಿಭಾನ್ವೇಷಣಾ ಪರೀಕ್ಷೆ(ನ್ಯಾಶನಲ್ ಟ್ಯಾಲೆಂಟ್ ಸಚರ್್) ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ ಪ್ರತಿಷ್ಠೆಯ ವಿಷಯವಾಗಿದ್ದು, ಮೆಂಟಲ್ ಎಬಿಲಿಟಿ ಟೆಸ್ಟ್(ಮ್ಯಾಟ್) ಮತ್ತು ಸ್ಕಾಲೆಸ್ಟಿಕ್ ಎಬಿಲಿಟಿ ಟೆಸ್ಟ್(ಎಸ್ಎಟಿ) ಎಂಬ ಪ್ರಕಾರಗಳಲ್ಲಿ ನಡೆಯುತ್ತದೆ.
ವಿನಯ್ ಕುಮಾರ್ 2013ರಲ್ಲಿ ನಡೆದ ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಗೊಂಡು, 2014 ಅಕ್ಟೋಬರ್ 19ರಂದು ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಮೆಂಟಲ್ ಎಬಿಲಿಟಿ ಟೆಸ್ಟ್(ಮ್ಯಾಟ್) ಮತ್ತು ಸ್ಕಾಲೆಸ್ಟಿಕ್ ಎಬಿಲಿಟಿ ಟೆಸ್ಟ್(ಎಸ್ಎಟಿ) ಪರೀಕ್ಷೆಯಲ್ಲಿ ಉನ್ನತ ಅಂಕದೊಂದಿಗೆ ವಿನಯ್ ಕುಮಾರ್ ಆಯ್ಕೆಯಾಗುವ ಮೂಲಕ ಎಕ್ಸ್ಪಟರ್್ ಸಂಸ್ಥೆಗೆ ಕೀತರ್ಿ ತಂದಿದ್ದಾರೆ.
ಎಕ್ಸ್ಪಟರ್್ ಪದವಿಪೂರ್ವ ಕಾಲೇಜು ವಿದ್ಯಾಥರ್ಿಗೆ ಅಭಿನಂದನೆ
ಮಂಗಳೂರು: ನವದೆಹಲಿಯ ಎನ್.ಸಿ.ಇ.ಆರ್.ಟಿ. ನಡೆಸುವ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ(ನ್ಯಾಶನಲ್ ಟ್ಯಾಲೆಂಟ್ ಸಚರ್್)ಯಲ್ಲಿ ಮಂಗಳೂರಿನ ವಳಚ್ಚಿಲ್ ಎಕ್ಸ್ಪಟರ್್ ಪದವಿಪೂರ್ವ ಕಾಲೇಜಿನ ವಿದ್ಯಾಥರ್ಿ ವಿನಯ್ಕುಮಾರ್ ಜಿ.ವಿ. ತೇರ್ಗಡೆಗೊಂಡಿದ್ದು, ಎಕ್ಸ್ಪಟರ್್ ಸಮೂಹಸಂಸ್ಥೆಗಳ ಅಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್ ಮತ್ತು ಕಾರ್ಯದಶರ್ಿ ಶ್ರೀಮತಿ ಉಷಾಪ್ರಭಾ ಎನ್. ನಾಯಕ್ ವಿದ್ಯಾಥರ್ಿಯನ್ನು ಅಭಿನಂದಿಸಿದ್ದಾರೆ.
ಎಕ್ಸ್ಪಟರ್್ ಸಮೂಹಸಂಸ್ಥೆಗಳ ಟ್ರಸ್ಟಿಗಳಾದ ಪ್ರೊ. ಪಿ.ಶಾಂತಾರಾಮ, ಡಾ.ಡಿ.ಶ್ರೀಪತಿ ರಾವ್, ಡಾ.ಪ್ರೇಮ್ಕುಮಾರ್, ಉಸ್ತಾದ್ ರಫೀಕ್ ಖಾನ್, ಅಮೃತ್ ಕಿಣಿ, ಬಿ.ಮಂಜುನಾಥ್ ಕಾಮತ್, ವಳಚ್ಚಿಲ್ ಎಕ್ಸ್ಪಟರ್್ ಪದವಿಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಡಾ.ಎನ್.ಕೆ.ವಿಜಯನ್, ವೈಸ್ಪ್ರಿನ್ಸಿಪಾಲ್ ಗುರುದತ್ತ್ ಎನ್. ಅವರು ಅಭಿನಂದಿಸಿದ್ದಾರೆ.
ಎನ್.ಸಿ.ಇ.ಆರ್.ಟಿ. ನಡೆಸುವ ಪ್ರತಿಭಾನ್ವೇಷಣಾ ಪರೀಕ್ಷೆ(ನ್ಯಾಶನಲ್ ಟ್ಯಾಲೆಂಟ್ ಸಚರ್್) ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ ಪ್ರತಿಷ್ಠೆಯ ವಿಷಯವಾಗಿದ್ದು, ಮೆಂಟಲ್ ಎಬಿಲಿಟಿ ಟೆಸ್ಟ್(ಮ್ಯಾಟ್) ಮತ್ತು ಸ್ಕಾಲೆಸ್ಟಿಕ್ ಎಬಿಲಿಟಿ ಟೆಸ್ಟ್(ಎಸ್ಎಟಿ) ಎಂಬ ಪ್ರಕಾರಗಳಲ್ಲಿ ನಡೆಯುತ್ತದೆ.
ವಿನಯ್ ಕುಮಾರ್ 2013ರಲ್ಲಿ ನಡೆದ ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಗೊಂಡು, 2014 ಅಕ್ಟೋಬರ್ 19ರಂದು ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಮೆಂಟಲ್ ಎಬಿಲಿಟಿ ಟೆಸ್ಟ್(ಮ್ಯಾಟ್) ಮತ್ತು ಸ್ಕಾಲೆಸ್ಟಿಕ್ ಎಬಿಲಿಟಿ ಟೆಸ್ಟ್(ಎಸ್ಎಟಿ) ಪರೀಕ್ಷೆಯಲ್ಲಿ ಉನ್ನತ ಅಂಕದೊಂದಿಗೆ ವಿನಯ್ ಕುಮಾರ್ ಆಯ್ಕೆಯಾಗುವ ಮೂಲಕ ಎಕ್ಸ್ಪಟರ್್ ಸಂಸ್ಥೆಗೆ ಕೀತರ್ಿ ತಂದಿದ್ದಾರೆ.
EXPERT PU COLLEGE VALACHIL - NATIONAL TALENT SEARCH- VINAY KUMAR G.V. SELECTED
ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗೆ ಅಭಿನಂದನೆ
ಮಂಗಳೂರು: ನವದೆಹಲಿಯ ಎನ್.ಸಿ.ಇ.ಆರ್.ಟಿ. ನಡೆಸುವ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ(NATIONAL TALENT SEARCH) ಯಲ್ಲಿ ಮಂಗಳೂರಿನ ವಳಚ್ಚಿಲ್ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ವಿನಯ್ ಕುಮಾರ್ ಜಿ.ವಿ. ಗಮನಾರ್ಹ ಸಾಧನೆ ಮಾಡಿದ್ದಾರೆ.
ಎನ್.ಸಿ.ಇ.ಆರ್.ಟಿ. ನಡೆಸುವ ಪ್ರತಿಭಾನ್ವೇಷಣಾ ಪರೀಕ್ಷೆ(NATIONAL TALENT SEARCH–NTS) ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಷ್ಠೆಯ ವಿಷಯವಾಗಿದ್ದು, MENTAL ABILITY TEST್(MAT) ಮತ್ತು SCHOLESTIC ABILITY TEST್(SAT) ಎಂಬ ಪ್ರಕಾರಗಳಲ್ಲಿ ನಡೆಯುತ್ತದೆ.
ವಿನಯ್ ಕುಮಾರ್ 2013ರಲ್ಲಿ ನಡೆದ ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಗೊಂಡು(50ಸಾವಿರ ವಿದ್ಯಾರ್ಥಿಗಳ ಪೈಕಿ 235 ಮಂದಿ ತೇರ್ಗಡೆಯಾಗಿದ್ದರು.) 2014 ಅಕ್ಟೋಬರ್ 19ರಂದು ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಮೆಂಟಲ್ ಎಬಿಲಿಟಿ ಟೆಸ್ಟ್(ಮ್ಯಾಟ್) ಮತ್ತು ಸ್ಕಾಲೆಸ್ಟಿಕ್ ಎಬಿಲಿಟಿ ಟೆಸ್ಟ್(ಎಸ್ಎಟಿ) ಪರೀಕ್ಷೆಯಲ್ಲಿ ಉನ್ನತ ಅಂಕದೊಂದಿಗೆ ವಿನಯ್ ಕುಮಾರ್ ಆಯ್ಕೆಯಾಗುವ ಮೂಲಕ ಎಕ್ಸ್‌ಪರ್ಟ್ ಸಂಸ್ಥೆಗೆ ಕೀರ್ತಿ ತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪರೀಕ್ಷೆಯಲ್ಲಿ ಸುಮಾರು 3ಸಾವಿರದಷ್ಟು ಮಂದಿ ಪರೀಕ್ಷೆ ಬರೆದಿದ್ದು, 1ಸಾವಿರ ಮಂದಿ ಆಯ್ಕೆಯಾಗಿದ್ದಾರೆ.
ಸ್ಕಾಲರ್‌ಶಿಪ್ :
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾಸಿಕ ರೂ.500 ವಿದ್ಯಾರ್ಥಿ ವೇತನ ಲಭಿಸುತ್ತದೆ. ವಿಜ್ಞಾನ ವಿಷಯದಲ್ಲಿ ಉನ್ನತ ಶಿಕ್ಷಣ ಮುಂದುವರಿಸುವ ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಪದವಿ ಗಳಿಸುವವ ವರೆಗೆ ಈ ವಿದ್ಯಾರ್ಥಿ ವೇತನ ಮುಂದುವರಿಯುತ್ತದೆ. ವಿಜ್ಞಾನದತ್ತ ವಿದ್ಯಾರ್ಥಿಗಳನ್ನು ಸೆಳೆಯುವುದೇ ಈ ಪರೀಕ್ಷೆಯ ಪ್ರಧಾನ ಉದ್ದೇಶ.
ವಿನಯ್‌ಕುಮಾರ್ ಜಿ.ವಿ. ಮೈಸೂರಿನ ಅಗ್ರಹಾರ ನಿವಾಸಿಯಾಗಿದ್ದು, ಅವರ ತಂದೆ ವಸಂತ ಕುಮಾರ್ ಜಿ.ಎಸ್. ಮೈಸೂರಿನ ವಿಜಯ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಉನ್ನತ ಶಿಕ್ಷಣಕ್ಕಾಗಿ, ಮೈಸೂರಿನ ಮಹರ್ಷಿ ಪಬ್ಲಿಕ್ ಸ್ಕೂಲ್‌ನ 8ನೇ ತರಗತಿಯಲ್ಲಿರುವಾಗಲೇ ವಿನಯ್ ಬರೆಯಲು ತಯಾರಿ ನಡೆಸಿದ್ದರು. ಅಲ್ಲಿನ ಉಪ ಪ್ರಾಂಶುಪಾಲ ಸತ್ಯನಾರಾಯಣ ಶರ್ಮ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಪ್ರೇರಣೆ, ತರಬೇತಿ ನೀಡಿದರು.
ಪೂರ್ವತಯಾರಿ:
8ನೇ ತರಗತಿಯಿಂದಲೇ ಆರಂಭ. 10ನೇ ತರಗತಿಯಲ್ಲಿ ಬರೆದೆ. ಮೈಸೂರಿನಲ್ಲಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಟ್ಯೂಷನ್ ನೀಡುತ್ತಿದ್ದ ಕೆ.ಎಚ್.ರಾವ್ ಪ್ರೇರಣೆ ನೀಡಿದರು. ಈ ಪರೀಕ್ಷೆಯ ಬಗ್ಗೆ ಸಂಪೂರ್ಣ ಮಾಹಿತಿದರು. 8ನೇ ತರಗತಿಯಲ್ಲಿ ಈ ಪರೀಕ್ಷೆಯಲ್ಲಿ ಕಂಡ ಸೋಲು(3 ಅಂಕಗಳಲ್ಲಿ ವಿಫಲ) ಮುಂದಿನ ಪರೀಕ್ಷೆ ಬರೆಯಲು ಛಲವನ್ನು ಮೂಡಿಸಿತು. ಕೆ.ಎಚ್.ರಾವ್ ಅವರು ಎಸ್ಎಸ್ಎಲ್‌ಸಿ ಬಳಿಕ ಉನ್ನತ ಶಿಕ್ಷಣ ಪಡೆಯಲು ಮಂಗಳೂರಿನ ಪ್ರತಿಷ್ಠಿತ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿಗೆ ಸೇರುವಂತೆ ಪ್ರೋತ್ಸಾಹದ ಮಾತುಗಳನ್ನಾಡಿದರು. ಅವರ ಮಾರ್ಗದರ್ಶನದಂತೆ ಮುನ್ನಡೆದ ಪರಿಣಾಮ ಸಾಧನೆಗೆ ಯಶಸ್ಸು ಲಭಿಸಿದೆ. ಇದರಿಂದ ಅವರಿಗೆ ತುಂಬು ಸಂತಸವಾಗಿದೆ ಎಂದು ವಿನಯ್‌ಕುಮಾರ್ ಜಿ.ವಿ. ಕೃತಜ್ಞತೆಯಿಂದಲೇ ಹೇಳುತ್ತಾರೆ.
ಎಕ್ಸ್‌ಪರ್ಟ್ ಶಿಕ್ಷಣ ಕಣ್ಣು ತೆರೆಸಿತು:
ರಾಷ್ಟ್ರಮಟ್ಟದ ಮೆಂಟಲ್ ಎಬಿಲಿಟಿ ಟೆಸ್ಟ್(ಮ್ಯಾಟ್) ಮತ್ತು ಸ್ಕಾಲೆಸ್ಟಿಕ್ ಎಬಿಲಿಟಿ ಟೆಸ್ಟ್(ಎಸ್ಎಟಿ) ಪರೀಕ್ಷೆ ಬರೆಯಲು ಎಕ್ಸ್‌ಪರ್ಟ್ ಕಾಲೇಜಿನ ಶಿಕ್ಷಣ ಉಪಕಾರಿಯಾಗಿದೆ. ಇಲ್ಲಿನ ಶಿಕ್ಷಣದಿಂದ ಪರೀಕ್ಷೆ ಮತ್ತಷ್ಟು ಸುಲಭವಾಗುವಂತೆ ಮಾಡಿದೆ. ಡಿಸೆಂಬರ್ 23ರಂದು ಈ ಪರೀಕ್ಷೆಯ ಫಲಿತಾಂಶ ಬಂದಾಗ ಎಕ್ಸ್‌ಪರ್ಟ್ ಸಂಸ್ಥೆಗೆ ಸೇರಿದ ಬಗ್ಗೆ ಅಭಿಮಾನ ಮೂಡಿತು. ಈ ಕಾಲೇಜಿಗೆ ಸೇರಿದ ಕಾರಣ ಓದುವುದು ಹೇಗೆ, ಸಮಯವನ್ನು ಓದಿಗೆ ಮೀಸಲಿಡುವ ವಿಷಯ ತಿಳಿಯಿತು. ಶ್ರಮ ವಹಿಸಿದರೆ ಬದುಕಿನಲ್ಲಿ ಯಶಸ್ಸು ಸುಲಭಸಾಧ್ಯ ಎಂಬ ಸತ್ಯವನ್ನು ಎಕ್ಸ್‌ಪರ್ಟ್ ಕಲಿಸಿದೆ. ಹೆತ್ತವರು ನೀಡಿದ ಪ್ರೋತ್ಸಾಹ ನನ್ನ ಸಾಧನೆಗೆ ದಾರಿದೀಪವಾಗಿದೆ. ನವದೆಹಲಿಯ ಆಲ್ ಇಂಡಿಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಕನಸು ಇದೆ ಎನ್ನುತ್ತಾರೆ ವಿನಯ್‌ಕುಮಾರ್ ಜಿ.ವಿ.
––––––––––––––––––––––––––––––––––––––––––––––––––––––––––––––––––––––––
ವರದಿ: ಸುರೇಶ್ ಎಡನಾಡು, ಕನ್ನಡ ವಿಭಾಗ, ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜು, ವಳಚ್ಚಿಲ್, ಮಂಗಳೂರು.
––––––––––––––––––––––––––––––––––––––––––––––––––––––––––––––––––––––––
Saturday, 20 December 2014
Expert Time Square of Dance and Music Festival-2014
MANGALURU:
Indian classical music should be protected and should not be allowed to deplete
says Mrs Ushaprabha N. Nayak the Secretary and Correspondent Expert group of
institutions addressing the gathering on the occasion of Dance and Music Festival-2014
which was held at Time Square of Expert PU College Valachil Campus on Monday.
The
heart beat of a mother is a maiden music
for a baby when it is in the womb,music cant be understood it should be felt.
Music is silence. When silence withers there blooms a music which comforts our
mind says mrs nayak.
Maiden
programme of Padmashree awardee Pandit Bhajan Safori and Abhay Safori who
created world of music which was well supported by taborer Mr.Raveendra.
Pandith Bhajan Safori has also addressed the students.
Usthad
Rafeeq Khan, Mr.Manjunath Kamath trustees , Mr Pradeep Kumar Kalkura President
of Dakshin Kannada Jilla Sahithya Parishath
and Mr.Gurudatt N. Vice Principal
were present during the programme.
Prof.
Narendra L Nayak the Chairman of Expert group of institutions felicitated the
artists.Dr.N.K.Vijayan principal rendered vote of thanks.
Thursday, 18 December 2014
EXPERT PU COLLEGE VALACHIL -TIME SQUARE DANCE & MUSIC FESTIVAL-14
ಶಾಸ್ತ್ರೀಯ ಸಂಗೀತದ ಶ್ರೀಮಂತಿಕೆಯನ್ನು ಕಾಪಾಡಬೇಕು
ವಳಚ್ಚಿಲ್: ಭಾರತದ ಶಾಸ್ತ್ರೀಯ ಸಂಗೀತದ ಶ್ರೀಮಂತಿಕೆಯನ್ನು ಕಾಪಾಡಬೇಕು ಎಂದು ಮಂಗಳೂರಿನ ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀಮತಿ ಉಷಾಪ್ರಭಾ ಎನ್. ನಾಯಕ್ ಹೇಳಿದರು.
ಮಂಗಳೂರಿಗೆ ಸಮೀಪದ ವಳಚ್ಚಿಲ್ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜು ಕ್ಯಾಂಪಸ್ಸಿನ ‘ಟೈಮ್‌ಸ್ಕ್ವೇರ್’ನಲ್ಲಿ ಏರ್ಪಡಿಸಿದ ‘ಟೈಮ್‌ಸ್ಕ್ವೇರ್ ಡ್ಯಾನ್ಸ್ ಆ್ಯಂಡ್ ಮ್ಯೂಸಿಕ್ ಫೆಸ್ಟಿವಲ್-2014’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಯಿಯ ಗರ್ಭದಲ್ಲಿರುವಾಗಲೇ ಅನುಭವಕ್ಕೆ ಬರುವ ಹೃದಯದ ಬಡಿತ ಮಗುವಿನ ಪಾಲಿಗೆ ಚೊಚ್ಚಲ ಸಂಗೀತ. ಯಾವುದೇ ಸಂಗೀತವನ್ನು ಅರ್ಥಮಾಡಿಕೊಳ್ಳಲಾಗುವುದಿಲ್ಲ; ಅದನ್ನು ಅನುಭವಿಸಬೇಕು. ಸಂಗೀತವೆಂದರೆ ಮೌನ. ಮೌನವನ್ನು ಒಡೆದು ಬರುವುದೇ ಸಂಗೀತ. ಸಂಗೀತ ಮೌನದಿಂದ ಅರಳಿ ಆಸ್ವಾದಕರ ಮನಸ್ಸನ್ನು ಮುದಗೊಳಿಸುತ್ತದೆ ಎಂದರು.
ಎಕ್ಸ್‌ಪರ್ಟ್ ಕಾಲೇಜಿನ ‘ಟೈಮ್‌ಸ್ಕ್ವೇರ್ ಡ್ಯಾನ್ಸ್ ಆ್ಯಂಡ್ ಮ್ಯೂಸಿಕ್ ಫೆಸ್ಟಿವಲ್-2014’ ಎಂಬ ಚೊಚ್ಚಲ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪದ್ಮಶ್ರೀ ಪಂಡಿತ್ ಭಜನ್ ಸೊಪೋರಿ ಮತ್ತು ಅಭಯರುಸ್ತುಂ ಸೊಪೋರಿ ಅವರ ಸಂತೂರ್ ಜುಗಲ್ಬಂದಿ ಸುಂದರ ನಾದಲೋಕವನ್ನೇ ಸೃಷ್ಟಿಸಿತು. ಇಳಿಸಂಜೆಯ ತಂಗಾಳಿಯಲ್ಲಿ ಸಂತೂರ್ ನಿನಾದ ಮಿಲನಗೊಂಡು ಸಂಗೀತ ರಸಿಕರ ಮನ ತೇಲಾಡಿತು. ಬೆಂಗಳೂರಿನ ರವೀಂದ್ರ ಯವಗಲ್ ಅವರು ತಬಲಾದಲ್ಲಿ ಸಾಥ್ ನೀಡಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಪದ್ಮಶ್ರೀ ಪಂಡಿತ್ ಭಜನ್ ಸೊಪೋರಿ ಅವರು, ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಯನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಗುರಿ ಸಾಧನೆಗೆ ಶ್ರಮಕಾರ್ಯ ಅತ್ಯಗತ್ಯ ಎಂದು ಕಿವಿಮಾತು ಹೇಳಿದರು.
ಟ್ರಸ್ಟಿಗಳಾದ ಉಸ್ತಾದ್ ರಫೀಖ್ ಖಾನ್, ಮಂಜುನಾಥ್ ಕಾಮತ್, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಉಪ ಪ್ರಾಂಶುಪಾಲ ಗುರುದತ್ ಎನ್. ಉಪಸ್ಥಿತರಿದ್ದರು.
ಎಕ್ಸ್‌ಪರ್ಟ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್ ಕಲಾವಿದರನ್ನು ಸನ್ಮಾನಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಕೆ.ವಿಜಯನ್ ವಂದಿಸಿದರು.
Subscribe to:
Posts (Atom)