Tuesday, 18 November 2014

EX-PRO-2014

ವಳಚ್ಚಿಲ್ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನಲ್ಲಿ 'ಎಕ್ಸ್‌–ಪ್ರೊ–2014'
ರಾಜ್ಯಮಟ್ಟದ ವಿಜ್ಞಾನ ಮತ್ತು ವೃತ್ತಿಪರಿಚಯ ಮೇಳ

ಮಂಗಳೂರು: ಇಲ್ಲಿಗೆ ಸಮೀಪದ ವಳಚ್ಚಿಲ್ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನ ನೂತನ ಕ್ಯಾಂಪಸ್ಸಿನಲ್ಲಿ 'ಭರವಸೆಯ ಭವಿಷ್ಯಕ್ಕೆ ಪ್ರಗತಿಪರ ವೇದಿಕೆ' ಎಂಬ ಆಶಯದೊಂದಿಗೆ 'ಎಕ್ಸ್‌–ಪ್ರೊ–2014' ಎಂಬ ರಾಜ್ಯಮಟ್ಟದ ವಿಜ್ಞಾನ ಮತ್ತು ವೃತ್ತಿಪರಿಚಯ ಮೇಳವನ್ನು ಡಿಸೆಂಬರ್ 8ರಂದು ಆಯೋಜಿಸಲಾಗಿದೆ.
ರಾಜ್ಯ ಮಟ್ಟದ ಈ ಸ್ಪರ್ಧೆಯಲ್ಲಿ ಪ್ರೌಢಶಾಲಾ ವಿಭಾಗದ 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಬಹುದು. ಸ್ಪರ್ಧೆಗಳು ವೈಯಕ್ತಿಕ ಮತ್ತು ಗುಂಪುಗಳ ವಿಭಾಗದಲ್ಲಿ ನಡೆಯಲಿದೆ. 
ಡಿಸೆಂಬರ್ 8ರಂದು ಬೆಳಿಗ್ಗೆ 9.30ಕ್ಕೆ ನೋಂದಾವಣೆ, 10 ಗಂಟೆಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ. ವೈಯಕ್ತಿಕ ಸ್ಪರ್ಧೆಗಳು 2 ಗಂಟೆ, ಗುಂಪು ಸ್ಪರ್ಧೆಗಳು 3 ಗಂಟೆಗಳ ಕಾಲಾವಧಿಯಲ್ಲಿ ನಡೆಯಲಿದೆ. ವಿಜೇತರಿಗೆ ನಗದು ಬಹುಮಾನ ಸಹಿತ ಸ್ಮರಣಿಕೆ ಹಾಗೂ ಪ್ರಮಾಣಪತ್ರಗಳನ್ನು ನೀಡಲಾಗುವುದು. ಅತ್ಯಧಿಕ ಅಂಕ ಗಳಿಸುವ ಶಾಲೆಗೆ ಸಮಗ್ರ ಚಾಂಪಿಯನ್‌ಶಿಪ್ ಟ್ರೋಫಿ ನೀಡಿ ಪುರಸ್ಕರಿಸಲಾಗುವುದು. 
ವೈಯಕ್ತಿಕ ವಿಭಾಗದಲ್ಲಿ ಗ್ರೀಟಿಂಗ್ ಕಾರ್ಡು ತಯಾರಿ, ಪೇಪರ್ ಬ್ಯಾಗ್ ತಯಾರಿ, ಬೊಂಬೆ ತಯಾರಿ, ಫ್ಲವರ್‌ವಾಸ್ ತಯಾರಿ, ವಾಕ್ಸ್ ಮೌಲ್ಡಿಂಗ್, ವೆಜ್‌ಟೇಬಲ್ ಪ್ರಿಂಟಿಂಗ್, ಆಭರಣ ತಯಾರಿ, ಕ್ಲೇ ಮಾಡಲಿಂಗ್, ಕೊಲಾಜ್, ಪೆನ್ಸಿಲ್ ಡ್ರಾಯಿಂಗ್, ಪೈಂಟಿಂಗ್(ಜಲವರ್ಣ), ಪೈಂಟಿಂಗ್(ತೈಲವರ್ಣ), ಕ್ಯಾಲಿಗ್ರಫಿ(ಕೈಬರಹ), ಜ್ಯಾಮೆಟ್ರಿಕಲ್ ಡ್ರಾಯಿಂಗ್, ಗ್ಲಾಸ್ ಪೈಂಟಿಂಗ್, ಪೋಸ್ಟರ್ ಡಿಸೈನಿಂಗ್, ಆರ್ಕಿಟೆಕ್ಚರಲ್ ಡ್ರಾಯಿಂಗ್, ಫೋಟೋಗ್ರಫಿ, ಕಸದಿಂದ ರಸ, ಸ್ಮರಣ ಶಕ್ತಿ ಪರೀಕ್ಷೆ ಮೊದಲಾದ ಸ್ಪರ್ಧೆಗಳು ನಡೆಯಲಿದೆ. 
ಗುಂಪು ವಿಭಾಗದಲ್ಲಿ ಸ್ಟಿಲ್ ಮಾಡೆಲ್ಸ್, ವರ್ಕಿಂಗ್ ಮಾಡೆಲ್ಸ್, ಹೊಸ ಶೋಧನೆ ಅಥವಾ ಸಂಶೋಧನೆ, ಪವರ್ ಪಾಯಿಂಟ್ ಪ್ರೆಸೆಂಟೇಶನ್, ಬಯೋಕ್ರೋಮ್ ಸ್ಪರ್ಧೆಗಳು ನಡೆಯಲಿದ್ದು, ಗುಂಪಿನಲ್ಲಿ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗುವುದು.
ಸ್ಪರ್ಧಾಳುಗಳು ತಮಗೆ ಬೇಕಾದ ಎಲ್ಲಾ ವಸ್ತುಗಳನ್ನು ತರಬೇಕು. ಒಬ್ಬ ವಿದ್ಯಾರ್ಥಿ ಒಂದೇ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಆಸಕ್ತ ಶಾಲೆಗಳ ಮುಖ್ಯಸ್ಥರು ತಮ್ಮ ಶಾಲೆಯ ಸ್ಪರ್ಧಾಳುಗಳ ಭರ್ತಿ ಮಾಡಿದ ಅರ್ಜಿಯನ್ನು ನವೆಂಬರ್ 22ರಂದು ಸಂಜೆ 5 ಗಂಟೆಯೊಳಗೆ ವಳಚ್ಚಿಲ್ ಎಕ್ಸ್‌ಪರ್ಟ್ ಕಾಲೇಜಿನ ಕಚೇರಿಗೆ ಅಂಚೆ ಅಥವಾ ಇ-ಮೇಲ್ ಮುಖಾಂತರ ಸಲ್ಲಿಸಬಹುದು. ವಿಳಾಸ: ನಿರ್ದೇಶಕರು, 'ಎಕ್ಸ್‌–ಪ್ರೊ–2014', ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜು, ವಳಚ್ಚಿಲ್, ಮಂಗಳೂರು. ಇ–ಮೇಲ್ : expertexpro@gmail.com
ಹೆಚ್ಚಿನ ಮಾಹಿತಿಗೆ ಕಾರ್ಯಕ್ರಮ ನಿರ್ದೇಶಕರಾದ ಶ್ಯಾಮ್ ಪ್ರಸಾದ್(9481447560) ಅವರನ್ನು ಸಂಪರ್ಕಿಸಬಹುದು.

No comments:

Post a Comment