ವಳಚ್ಚಿಲ್ ಎಕ್ಸ್‌ಪರ್ಟ್ ಕಾಲೇಜಿನಲ್ಲಿ ರಾಜ್ಯೋತ್ಸವ ದಿನಾಚರಣೆ
ವಳಚ್ಚಿಲ್: ಕನ್ನಡಿಗರು ಮಾತೃಭಾಷೆಯ ಅಭಿಮಾನವನ್ನು ಕಾಪಾಡಿಕೊಂಡು ಕನ್ನಡನಾಡಿನ ಗೌರವ, ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಎಕ್ಸ್‌ಪರ್ಟ್ ಸಮೂಹಸಂಸ್ಥೆಗಳ ಅಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್ ಹೇಳಿದರು.
ವಳಚ್ಚಿಲ್ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಕನ್ನಡ ಧ್ವಜಾರೋಹಣ ಮಾಡಿ ಅವರು ಮಾತನಾಡಿದರು.
1956ರಲ್ಲಿ `ಮೈಸೂರು' ಎಂದು ಏಕೀಕರಣಗೊಂಡ ನಮ್ಮ ರಾಜ್ಯ 1973ರಲ್ಲಿ `ಕರ್ನಾಟಕ' ಎಂಬ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂತು. ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಕುವೆಂಪು ಬರೆದ ನಾಡಗೀತೆಯನ್ನು ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಡುವ ಮೂಲಕ ಕನ್ನಡ ನಾಡು-ನುಡಿಯ ಬಗ್ಗೆ ಅಭಿಮಾನ ಪಡಬೇಕು ಎಂದರು. ದೇಶದಲ್ಲಿ ಭಾಷೆಯ ಆಧಾರದಲ್ಲಿ ರಾಜ್ಯೋದಯವಾಗುವ ಮೂಲಕ ಕನ್ನಡ ಭಾಷೆಗೆ ತನ್ನದೇ ಆದ ಗೌರವ ಪ್ರಾಪ್ತಿಯಾದಂತಾಗಿದೆ. ಇಲ್ಲಿನ ನದಿ, ಜನರು, ಪ್ರೇಕ್ಷಣೀಯ ಸ್ಥಳ, ಸಂಸ್ಕೃತಿ, ಆಚಾರ-ವಿಚಾರ ಅನನ್ಯವಾಗಿದ್ದು ವಿಶ್ವವಿಖ್ಯಾತವಾಗಿವೆ. ಕನರ್ಾಟಕ ರಾಜ್ಯದ ಎಲ್ಲ ಜಿಲ್ಲೆಗಳ ವಿದ್ಯಾರ್ಥಿಗಳು ಎಕ್ಸ್‌ಪರ್ಟ್ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಮೂಲಕ ಈ ಸಂಸ್ಥೆ ಕರ್ನಾಟಕದಲ್ಲೇ ಅನನ್ಯ ಸಾಧನೆ ಮಾಡಿದೆ ಎಂದರು.
ಟ್ರಸ್ಟಿ ಉಸ್ತಾದ್ ರಫೀಖ್ ಖಾನ್, ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಕೆ.ವಿಜಯನ್, ಉಪಪ್ರಾಂಶುಪಾಲ ಗುರುದತ್ ಎನ್, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಶೆಟ್ಟಿ, ಕಾರ್ಯಕ್ರಮ ಸಂಯೋಜನಾಧಿಕಾರಿ ವಿದ್ಯಾಶಾರದ ಜಿ.ಕೆ. ಇದ್ದರು. ವಿದ್ಯಾರ್ಥಿ ನಾಯಕ ಚಂದನ್ ಜಿ.ಆರ್. ಸ್ವಾಗತಿಸಿ, ವಂದಿಸಿದರು.
No comments:
Post a Comment