Sunday, 9 November 2014

EXPERT PU COLLEGE VALACHIL - DEEPAVALI CELEBRATION-14

ಉತ್ತಮ ಶಿಕ್ಷಕರಿಂದ ಮಾತ್ರ ಅತ್ಯುತ್ತಮ ಶಿಕ್ಷಣ

ವಳಚ್ಚಿಲ್: ಸ್ಪರ್ಧಾತ್ಮಕ ಯುಗದಲ್ಲಿ ಉಪನ್ಯಾಸಕರು ಮತ್ತು ಭಾಷಣಕಾರರ ಅಗತ್ಯವಿಲ್ಲ. ಉತ್ತಮ ಶಿಕ್ಷಕರಿಂದ ಮಾತ್ರ ಅತ್ಯುತ್ತಮ ಶಿಕ್ಷಣ ನೀಡಲು ಸಾಧ್ಯ ಎಂದು ಮಂಗಳೂರಿನ ಕೊಡಿಯಾಲ್‌ಬೈಲ್ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಮಚಂದ್ರ ಭಟ್ ಅಭಿಪ್ರಾಯಪಟ್ಟರು.
ವಳಚ್ಚಿಲ್ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನ ನೂತನ ಕ್ಯಾಂಪಸ್ಸಿನಲ್ಲಿ ದೀಪಾವಳಿ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಳಕು ಜ್ಞಾನದ ಸಂಕೇತ. ಅಂಧಕಾರವನ್ನು ತೊಡೆದುಹಾಕಿ ಅರಿವು ಮತ್ತು ಸಾತ್ವಿಕತೆಯ ಸಂದೇಶವನ್ನು ದೀಪಾವಳಿ ಬಿಂಬಿಸುತ್ತದೆ. ಅರಿವೇ ಗುರು ಎಂಬುದನ್ನು ಯುವ ಪೀಳಿಗೆ ಮನದಟ್ಟು ಮಾಡಿಕೊಂಡರೆ ಶಿಕ್ಷಣದ ನಿಜವಾದ ಉದ್ದೇಶ ಸಾರ್ಥಕವಾಗುತ್ತದೆ. ಎಕ್ಸ್‌ಪರ್ಟ್ ಕಾಲೇಜು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸುತ್ತಾ ಬಂದಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡರೆ ಭವಿಷ್ಯ ಸಫಲವಾಗುತ್ತದೆ ಎಂದವರು ವಿವರಿಸಿದರು.
ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ  ಉಷಾಪ್ರಭಾ ಎನ್. ನಾಯಕ್ ಮಾತನಾಡಿ, ಎಲ್ಲಾ ಹಬ್ಬಗಳೂ ಮಕ್ಕಳ ಪಾಲಿಗೆ ಮಹತ್ವಪೂರ್ಣವಾಗಿದೆ. ಈದ್‌ಮಿಲಾದ್ ಸಹಬಾಳ್ವೆ, ಗಣೇಶ ಚತುರ್ಥಿ ವಿಘ್ನ ನಾಶ, ಶಾರದಾಪೂಜೆ ವಿವೇಕ-–ಜ್ಞಾನ, ದೀಪಾವಳಿಯ ಲಕ್ಷ್ಮೀಪೂಜೆ ಸಾಧನೆಯ ಫಲ ಮತ್ತು ಕ್ರಿಸ್ಮಸ್ ಸಹನೆಯ ಮಹತ್ವವನ್ನು ಸಾರುತ್ತದೆ. ಇಂಥ ಹಬ್ಬಗಳನ್ನು ಎಕ್ಸ್‌ಪರ್ಟ್ ಸಂಸ್ಥೆ ಆಚರಿಸುವ ಮೂಲಕ ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತರಿಸುತ್ತಿದೆ ಎಂದರು.
ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್ ಅಧ್ಯಕ್ಷತೆ ವಹಿಸಿದರು.
ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಗಳ ಟ್ರಸ್ಟಿ ಉಸ್ತಾದ್ ರಫೀಕ್ ಖಾನ್, ಶೈಕ್ಷಣಿಕ ಸಲಹೆಗಾರ ಎಸ್.ಎಸ್.ನಾಯಕ್, ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಕೆ.ವಿಜಯನ್, ಉಪಪ್ರಾಂಶುಪಾಲ ಗುರುದತ್ ಎನ್. ಉಪಸ್ಥಿತರಿದ್ದರು.
ಕು.ನಿಶಿತಾ ಮತ್ತು ಕು.ಶೃತಿ ಕಾರ್ಯಕ್ರಮ ನಿರ್ವಹಿಸಿದರು.
ಬಳಿಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ನೃತ್ಯ ವೈಭವ, ಸುಡುಮದ್ದು ಪ್ರದರ್ಶನ ನಡೆಯಿತು.

No comments:

Post a Comment